11 ಲಕ್ಷ ಶ್ರೀ ರಾಘವೇಂದ್ರಾಯ ನಮಃ ಅಷ್ಟಾಕ್ಷರ ಮಹಾಯಾಗ

Created with Sketch.

 ವಿಶೇಷತೆ

 ಶ್ರೀ ಗುರುರಾಯರ ಪುಣ್ಯ  ರಾಶಿಯು ಇರುವುದು 700 ವರ್ಷಕ್ಕಿಂತ ಅಧಿಕ ವರ್ಷಗಳು. ಈ ಕಾರಣದಿಂದಲೇ ನಮ್ಮ ಶ್ರೀ ಗುರುರಾಯರು ಮೋಕ್ಷಕ್ಕೆ ಹೋಗುವ ಎಲ್ಲ ಅವಕಾಶಗಳಿದ್ದಾಗಿಯೂ ಸಹ ಮೋಕ್ಷಕ್ಕೆ ಹೋಗದೆ ಪರಮಾತ್ಮನನ್ನು ಪ್ರಾರ್ಥಿಸುವ ಮೂಲಕ ಸಶರೀರವಾಗಿ ಅಂದರೆ ಜೀವಂತವಾಗಿ ಪರಮ ಪವಿತ್ರ ಸನ್ನಿಧಾನವಾದ ಮಂತ್ರಾಲಯದಲ್ಲಿ ಶ್ರೀ ಕೃಷ್ಣ ಪರಮಾತ್ಮ ಪಾದ ಸ್ಪರ್ಶ ಮಾಡಿರುವಂತಹ ಸ್ಥಳ ಶ್ರೀ ನರಸಿಂಹದೇವರ ವಿಶೇಷ ಸನ್ನಿಧಾನ , ಸುಮಾರು 600 ವರ್ಷಗಳ ಕೆಳಗೆ ಶ್ರೀ ಶ್ರೀ ವಿಭುದೇಂದ್ರ ತೀರ್ಥರೆಂಬ ಅಪ್ರೋಕ್ಷ ಜ್ಞಾನಿಗಳು ಕೋಟಿ ಕೋಟಿ ನರಸಿಂಹ ಜಪ ಮಾಡಿರುವ ಪವಿತ್ರ ಸ್ಥಳ.  ಈ ಪುಣ್ಯ ಸ್ಥಳದಲ್ಲಿ 351 ವರ್ಷಗಳ ಕೆಳಗೆ ಜೀವಂತವಾಗಿ ಬೃಂದಾವನ ಪ್ರವೇಶ ಮಾಡಿ ಅಂದು ನೆರೆದಿದ್ದ ಭಕ್ತ ಜನ ಕೋಟಿಗೆ ಈ ರೀತಿ ಅಭಯವನಿತ್ತು - ಆತ್ಮೀಯ ಭಕ್ತರೇ,  ಆತ್ಮೀಯ ಶಿಷ್ಯರೇ,  ಪರಮಾತ್ಮನ ಅಜ್ಞಾನಸಾರ ನಾನು ಈ ಪರಮ ಪವಿತ್ರ ಸನ್ನಿಧಾನದಲ್ಲಿ ಜೀವಂತವಾಗಿ ಪದ್ಮಾಸನಾ ಸಕ್ತನಾಗಿ 700 ವರ್ಷಗಳ ಕಾಲ ನನ್ನ ಹೃದಯ ಮಂದಿರದಲ್ಲಿ ನರಹರಿ -ರಾಮ-ಕೃಷ್ಣ- ವೇದವ್ಯಾಸರು ಹಾಗು ನಾರಾಯಣ ದೇವರನ್ನು ಅನುಸಂಧಾನ ಮಾಡಿಕೊಂಡು ಜಪದಲ್ಲಿ ನಿರತರಾಗಿರುತ್ತೇನೆ.

Created with Sketch.

ಯಾರು ನನ್ನ ಈ ಬೃಂದಾವನ (ರಾಮದೇವರ ಕುಳಿತ ಕುಳಿತಿದ್ದಂತಹ ಪರಮ ಪವಿತ್ರ ಶಿಲೆ) ದರ್ಶನ ಮಾಡುತ್ತಾರೋ - ಮಂತ್ರಾಕ್ಷತೆ ಪಡೆಯುತ್ತಾರೋ- ಹಸ್ತೋದಕವನ್ನು (ಶ್ರೀ ರಾಯರ ನೈವೇದ್ಯ ಅನ್ನಪ್ರಸಾದ) ಸ್ವೀಕರಿಸುತ್ತಾರೋ- ಯಾರೋ ನನ್ನ ಅಷ್ಟಾಕ್ಷರ ನಾಮಾವಳಿಯನ್ನು ಮಂತ್ರ ರೂಪದಲ್ಲಿ ಬರೆಯುತ್ತಾರೋ-  ಜಪಿಸುತ್ತಾರೋ -ಹೋಮವನ್ನು ಮಾಡುತ್ತಾರೋ ಇಂತಹ ಭಕ್ತ ಜನ ಕೋಟಿಗೆ ನನ್ನ ಪುಣ್ಯ ರಾಶಿಯನ್ನು ಹಂಚುವುದರ ಮೂಲಕ 700 ವರ್ಷಗಳ ಕಾಲ ನಾನು ನಿಮ್ಮಗಳ ಹಾಗೆ ಭೌತಿಕ ಶರೀರದಲ್ಲಿ ,  ಬೃಂದಾವನದಲ್ಲಿ ನೆಲೆಯೂರಿ ಅನುಗ್ರಹಿಸುತ್ತೇನೆ ಎಂಬುದಾಗಿ ಅಂದು ನೆರೆದಿದ್ದ ಭಕ್ತ ಜನ ಕೋಟಿಗೆ ಅನುಗ್ರಹದ ಮುತ್ತು ಮಾಣಿಕ್ಯದ ಮಾತುಗಳನ್ನು  ಆಡಿ ಆಶೀರ್ವದಿಸಿದರು . ಇಂತಹ ಅಪ್ರೋಕ್ಷ ಜ್ಞಾನಿಗಳು ನಮ್ಮ ಭಾರತ ಖಂಡ ಕಂಡಂತಹ ಅದ್ವಿತೀಯ ದಯಾಳುಗಳು ನಮ್ಮ ಶ್ರೀ ಗುರುರಾಯರು.

ಇಂತಹ ಮಹಾನುಭಾವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ಶ್ರೀ ರಾಯರ ಅಂತರಂಗ ಭಕ್ತರ ಹಾಗೂ ಅವರ ಅನುಗ್ರಹಕ.

Created with Sketch.

ಇಂತಹ ಯತಿ ಶ್ರೇಷ್ಠರಾದ "ಶ್ರೀ ಶ್ರೀ ಶ್ರೀ ರಾಘವೇಂದ್ರ ಗುರುಸಾರವಭೌಮ" ರಿಗೆ ನಾವುಗಳೆಲ್ಲರೂ ಅವರಿಂದ ಅನುಗ್ರಹಿತರಾದ ,ಆಶೀರ್ವಾದ ಪಡೆದ ,ಅವರೇ ಉಸಿರು ಎಂದು ಜೀವನ ಮಾಡುತ್ತಿರುವ ಎಲ್ಲಾ ಅಂತರಂಗ ಭಕ್ತರುಗಳು ಈ ಮಹಾಯಾಗದಲ್ಲಿ ಸೇವಾ ಕರ್ತೃಗಳಾಗಿ ಭಾಗವಹಿಸುವುದರ ಮೂಲಕ ಶ್ರೀರಾಯರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಈ ನಿಟ್ಟಿನಲ್ಲಿ ಕಾಮಧೇನು ಕ್ಷೇತ್ರವು ತಮ್ಮೆಲ್ಲರನ್ನು ಈ ಮಹಾಯಾಗದಲ್ಲಿ ಭಾಗವಹಿಸುವುದರ ಮೂಲಕ ಸಹಕಾರ ನೀಡಬೇಕೆಂದು ಕೋರುತ್ತದೆ.

ವಿಶೇಷ ಸೂಚನೆ

  1.    ನಮ್ಮಗಳ ಜೀವಿತಾವಧಿಯಲ್ಲಿ ಒಮ್ಮೆ ದೊರೆಯಬಹುದಾದ ಈ ಮಹಾಯಾಗ.
  2.   ಈ ಮಹಾಯಾಗವು ಮತ್ತೊಮ್ಮೆ 2195ನೇ ಇಸವಿಯಲ್ಲಿ ಆಚರಿಸಲಾಗುತ್ತಿದೆ.( ಶ್ರೀ ರಾಯರು       ಬೃಂದಾವನ ಪ್ರವೇಶದ 525ನೇ ವರ್ಷ).
  3.  ಈ ಮಹಾಯಾಗವು ಮೊಗದೊಮ್ಮೆ 2370ನೇ ಇಸವಿಗೆ ಆಚರಿಸಲಾಗುತ್ತದೆ (ಶ್ರೀರಾಯರು ಬೃಂದಾವನ ಪ್ರವೇಶ ಮಾಡಿ 700ನೇ ವರ್ಷ).