ಕಾಮಧೇನು ಕ್ಷೇತ್ರ
ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಮನದಾಳದ ನೋವುಗಳನ್ನು ಹಾಗೂ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಅವರಿಗೆ ಇಷ್ಟವಾದ ಹಾಗೂ ಅವರ ಮನಸ್ಸನ್ನು ಅರಿತುಕೊಂಡಿರುವ ವ್ಯಕ್ತಿಯೂ ಬೇಕು . ಆದರೆ ದುರದೃಷ್ಟವಶಾತ್ ಇದು ಎಲ್ಲರಿಗೂ ಸಿಗುವಂಥದ್ದಲ್ಲ, ಇದರಿಂದ ಸಾಕಷ್ಟು ಮನೆ ಮನೆಗಳು ಗಾಜಿನ ಚೂರಿನಂತೆ ಛಿದ್ರಗೊಂಡಿದೆ ಮತ್ತು ತಮ್ಮಗಳ ಅನುಭವ ಆಗುವ ಅನುಭಾವಗಳಿಂದ ಒಂದುಗೂಡಲು ತಮ್ಮಗಳ ತಪ್ಪಿನ ಅರಿವಿನಿಂದ ಸೋತು ಗೆಲ್ಲಲು ಸಾಧ್ಯವಾಗದೆ ಅತಂತ್ರ ಜೀವನವನ್ನು ಅನುಭವಿಸುತ್ತಿರುವುದು ಈ ಸಮಾಜದಲ್ಲಿ ನಾವೆಲ್ಲ ನೋಡುತ್ತಿದ್ದೇವೆ. ಬದುಕಲು ಆಗದೆ , ಬಾಳಲು ಆಗದೆ ಬಾವಿಯನ್ನು ಸೇರುತ್ತಿರುವುದು ಸತ್ಯ ಸಂಗತಿಯಾಗಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಗಳನ್ನು ಸಮಾಜದಲ್ಲಿ ಜನರು ಅನುಭವಿಸುತ್ತಿರುವುದನ್ನು ನನಗೆ ಬುದ್ಧಿ ಬಂದಾಗಿನಿಂದಲೂ ನೋಡುತ್ತಾ ಕೇಳುತ್ತಾ ಬಂದೆ . ನಮ್ಮ ಮನೆಯಲ್ಲಿ ತುಂಬು ಕುಟುಂಬ . ಅನಾರೋಗ್ಯದ ತಂದೆ ಮದುವೆಗೆ ನಿಂತ ಮೂರು ಜನ ಅಕ್ಕಂದಿರು ಉದ್ಯೋಗವಿಲ್ಲದ ಮನೆಯಲ್ಲಿ ಕಾಲ ಕಳೆಯುತ್ತಿರುವ ಇಬ್ಬರು ಅಣ್ಣಂದಿರು ಎಲ್ಲವನ್ನು ಸಂಯಮ ಸಮಾಧಾನದಿಂದ ಜಗಳ ಕದನ ಮಾಡಬೇಕು ಎಲ್ಲಾ ಮಕ್ಕಳಿಗೂ ದೈವ ಕೃಪಾ ಸಂಪನ್ನ ರಾಗುವಂತೆ ಮಾರ್ಗದರ್ಶನ ತೋರಿಸುತ್ತಾ ಪ್ರತಿ ಗುರುವಾರವು ಶ್ರೀರಾಯರ ಭಾವಚಿತ್ರಕ್ಕೆ 25 ನಮಸ್ಕಾರಗಳನ್ನು ಅಂದಿನಿಂದ ಇಂದಿನವರೆಗೂ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸಾತ್ವಿಕ ಹೃದಯ. ಎಲ್ಲರನ್ನೂ ನಮ್ಮವರೆಂದೇ ಭಾವಿಸುತ್ತಿರುವ ನನ್ನ ಮಾತೃ ಹೃದಯ ಅಮ್ಮನ ಗುಣಲಕ್ಷಣಗಳು.
ಈ ತಾಯಿ ಹೃದಯದ ಮಾರ್ಗದರ್ಶನವೇ ನನ್ನನ್ನು ಈ ಸಮಾಜಕ್ಕೆ ಏನಾದರೂ ಕಿಂಚಿತ್ ಅಳಿಲು ಸೇವೆ ಮಾಡಬೇಕೆಂಬ ಹಂಬಲಕ್ಕೆ ದೂಡಿದ್ದು . ಅಮ್ಮನ ಮಾತುಗಳು ಅವರ ಸಂಯಮ, ಸಮಾಧಾನ, ಸಹನೆ ಅವರು ಶ್ರೀರಾಯರ ಬಗ್ಗೆ ಹೇಳುತ್ತಿದ್ದ ಮಹಿಮೆ ಹಾಗೂ ಶ್ರೀ ಗುರುರಾಯರು ಅಮರ ಚರಿತ್ರೆಗಳು ಇಂದು ಕಾಮಧೇನು ಕ್ಷೇತ್ರದ ಹುಟ್ಟಿಗೆ ಕಾರಣವೆಂದರೆ ತಪ್ಪಾಗಲಾರದು.
ಈಗ ತಮ್ಮಗಳಿಗೆ ನಾನು ಹೇಳಲು ಹೊರಟಿರುವುದು ಏನೆಂದರೆ ಶ್ರೀ ಗುರುರಾಯರ ಬಗ್ಗೆ ತಿಳಿಯದವರು ಯಾರು ಇಲ್ಲ. ಆದರೆ ನನಗೆ ಅನಿಸಿದ್ದು ಮತ್ತು ನಾನು ಅನುಭವಿಸಿದ್ದು ಶ್ರೀ ಗುರುರಾಯರ ಮಹಿಮೆ ಹಾಗೂ ಅವರ ಅನುಗ್ರಹಗಳಿಂದ ಯಾವುದೇ ವ್ಯಕ್ತಿ - ಯಾವುದೇ ಸಮಸ್ಯೆಗಳಲ್ಲಿ -ಯಾವುದೇ ರೋಗ-ರುಜಿನಗಳಿಂದ ಬಳಲುತ್ತಿದ್ದಲ್ಲಿ ಯಾವುದೇ ವ್ಯಕ್ತಿ ಕೌಟುಂಬಿಕ ಕಲಹದಿಂದ, ಕೌಟುಂಬಿಕ ಸಮಸ್ಯೆಗಳಿಂದ ಸಂಸಾರದ ಕಷ್ಟ ದುಃಖಗಳಿಂದ ಬಳಲುತ್ತಿದ್ದಲ್ಲಿ ಶ್ರೀರಾಯರಲ್ಲಿ ತಮ್ಮ ಮನದಾಳದ ದುಃಖ -ದುಃಮಾನಗಳನ್ನು ಮನೋಭಿಷ್ಟಗಳನ್ನು ತಾನು ಅನುಭವಿಸುತ್ತಿರುವ ನೋವನ್ನು ಇಂತಹ ಸಹಸ್ರಾರು ಸಮಸ್ಯೆಗಳನ್ನು ಒಮ್ಮೆ "ಶ್ರೀ ರಾಯರ " ಬೃಂದಾವನ ದರ್ಶನ ಮಾಡುತ್ತಾ ಅಥವಾ "ಶ್ರೀ ರಾಘವೇಂದ್ರಾಯ ನಮಃ " ಜಪಿಸುವುದರ ಮೂಲಕ ಅಥವಾ ಬರೆಯುವುದರ ಮೂಲಕ ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
ಅದಕ್ಕಾಗಿಯೇ ಶ್ರೀ ಗುರುರಾಯರಿಗೆ ನಾನ್ನುಡಿ ಇದೆ ಕರೆದಾಗ ಬರುವ - ಕರೆದಲ್ಲಿಗೆ ಬರುವ -ಕರೆದಂತೆ ಬರುವ ಎಂಬುದಾಗಿ.
ಈ ಎಲ್ಲ ಮೇಲೆ ಹೇಳಿದಂತೆ ಶ್ರೀ ಗುರುರಾಯರ ಮೇಲಿನ ಭರವಸೆ ಅವರು ನಮ್ಮಗಳ ಅಪೇಕ್ಷೆಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದಿದ್ದರಿಂದಲೇ ನಾನು ನನ್ನ ಸಾಮಾಜಿಕ ಕಾಳಜಿಗಳಾದ ಉಚಿತ ವಿದ್ಯಾಯೋಜನೆ, ಉಚಿತ ಆರೋಗ್ಯಧಾಮ , ಪುರಾತನ ಹಿಂದೂ ದೇವಾಲಯಗಳ ಜೀವನೋದ್ಧಾರ , ಅನ್ನದಾನ ಹೀಗೆ ಹತ್ತು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡಬೇಕೆಂಬ ಅಪೇಕ್ಷೆ ಇದ್ದಾಗ್ಯೂ ಸಹ ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಅದರಲ್ಲಿಯೂ ಬಡತನದ ಭಾಗ್ಯದಲ್ಲಿಯೇ ಜೀವನ ಕಳೆಯುತ್ತಿದ್ದ ನನಗೆ ಅನಿಸಿದ್ದು ನಮಗಾಗಿಯೇ ಪರಮಾತ್ಮ ಕಳುಹಿಸಿದ ಒಬ್ಬ ಸಿದ್ದಿ ಪುರುಷ ಎಂದರೆ ಅವರೇ "ಶ್ರೀ ಗುರು ರಾಘವೇಂದ್ರ ಸಾರ್ವಭೌಮರು."
ಇವರು ಎಂತಹ ಮಹಾನುಭಾವರೆಂದರೆ ಜನ್ಮ- ಜನ್ಮದಲ್ಲಿಯೂ ,ಯುಗ -ಯುಗಗಳಲ್ಲಿಯೂ ಪರಮಾತ್ಮನ ದರ್ಶನ ,ಸಾಕ್ಷಾತ್ಕಾರ ಹಾಗೂ ಯಾವ ಫಲಾಪೇಕ್ಷೆ ಇಲ್ಲದೆ ನಿಷ್ಕಲ್ಮಶವಾದ ಮನಸ್ಸಿನಿಂದ ಸೇವೆ ಮಾಡಿದ ಫಲವೇ ಇಂದು" ಶ್ರೀ ರಾಘವೇಂದ್ರ ತೀರ್ಥ"ರಾಗಿ ನಮ್ಮೆಲ್ಲರನ್ನು ಉದ್ಧಾರ ಮಾಡುತ್ತಿರುವ ಕರುಣಾ ಸಮುದ್ರರು ಇಷ್ಟು ಮಾತ್ರವಲ್ಲದೆ ತಮ್ಮ ಪುಣ್ಯ ರಾಶಿಯು 700 ವರ್ಷಗಳ ಕಾಲ ಭಕ್ತರಿಗೆ ಹಂಚಿದರೂ ಇನ್ನೂ ಉಳಿಯುವಷ್ಟು ಇರುವಾಗ ಈ ಪುಣ್ಯ ಫಲದೊಂದಿಗೆ ಮೋಕ್ಷಕ್ಕೆ ಹೋಗಲು ಮನಸ್ಸಿಲ್ಲದೆ ಹೇಗೆ ಪ್ರಹಲ್ಲಾದ ರಾಜರಾಗಿ ನರಸಿಂಹ ದೇವರ ಮೋಕ್ಷಕ್ಕೆ ಕರೆದಾಗಿ ಮೋಕ್ಷಕ್ಕೆ ಬರುವುದಾದರೆ ಇಡೀ ದೈತ್ಯ ಕುಲವನ್ನು ಕರೆದುಕೊಂಡು ಬರಲು ತಮಗೆ ಸಮತವೇ ಸ್ವಾಮಿ -ಎಂದು ಕೇಳಿದ ಪ್ರಹಲ್ಲಾದ ರಾಜರೇ ನಮ್ಮ "ರಾಘವೇಂದ್ರ ಸ್ವಾಮಿ"ಗಳು. ಆದುದರಿಂದಲೇ ಭಕ್ತ ಜನಕೊಟಿ ಉದ್ಧಾರಕ್ಕೋಸ್ಕರ ಇದ್ದಾಗ್ಯೂ ಸಶರೀರವಾಗಿ ಪರಮ ಪವಿತ್ರ ಸಂವಿಧಾನವಾದ ಮಂತ್ರಾಲಯದಲ್ಲಿ ಬೃಂದಾವನವನ್ನು ಪ್ರವೇಶ ಮಾಡಿ ಇಂದಿಗೆ 35೦ವರ್ಷಗಳು ಕಳೆದರು ನಿರಂತರವಾಗಿ " ಶ್ರೀ ಗುರುರಾಯರ" ಬೃಂದಾವನ ದರ್ಶನ - ಅವರ ಸೇವೆ - ಅವರ ನಾಮಸ್ಮರಣೆ - ಅವರ ಫಲಮಂತ್ರಾಕ್ಷತೆ - ಅವರ ಹಸ್ತೋದಕ - ಹೀಗೆ ಯಾವುದಾದರೂ ಮೇಲಿನಂತಹ ಒಂದು ರೀತಿ ಶ್ರೀ ಗುರುರಾಯರ ಸೇವೆ ಮಾಡಿದ್ದೇ ಆದಲ್ಲಿ ನಮ್ಮಗಳ ಕಷ್ಟ- ಕಾರ್ಪಣ್ಯಗಳು, ದುಃಖ -ದುಮಾನಗಳನ್ನು , ರೋಗ - ರುಜಿನಗಳನ್ನು , ಮನೋಭಿಷ್ಟಗಳನ್ನು ಅನುಗ್ರಹಿಸುವ ಮಾತೃ ಹೃದಯ ನಮ್ಮ "ಶ್ರೀ ಶ್ರೀ ರಾಘವೇಂದ್ರ ಗುರು ಸಾರ್ವಭೌಮ"ರು.
ಆತ್ಮೀಯರೇ,
ನಮ್ಮ ತಾಯಿಯಿಂದ ಇಷ್ಟೆಲ್ಲ ಗುರುಗಳ ಬಗ್ಗೆ ತಿಳಿದುಕೊಂಡ ನಾನು ನನ್ನಿಂದ ಅಷ್ಟು ಸುಲಭವಾಗಿ ನನ್ನ ಸಾಮಾಜಿಕ ಕನಸುಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡೆ, ಇದು ಕಟ ಸತ್ಯ . ಕಾರಣ ಈಗಾಗಲೇ ನನ್ನ ಪರಿಸ್ಥಿತಿ ಹೇಳಿದ್ದೇನೆ. ಆದ ಕಾರಣ ನನ್ನ ಎಲ್ಲಾ ಕನಸುಗಳಿಗೆ ಯಾವ ಗುರರಾಯರು ಪ್ರೇರಣೆ ಮಾಡಿದ್ದರು ಅದೇ ಗುರುರಾಯರು ಅನುಗ್ರಹ ಮಾಡಲಿ ಎಂದು ಸುಮಾರು 25 ವರ್ಷಗಳಿಂದ ನಿರಂತರ ಗುರುರಾಯರನ್ನು ಕಾಡಿಬೇಡಿ , ಅವರ ನಾಮಸ್ಮರಣೆಯಾದ ಯಾವ ಅಷ್ಟಾಕ್ಷರ ಮಂತ್ರವನ್ನು ಶ್ರೀರಾಯರ ಅಂತರಂಗ ಭಕ್ತರು ಸ್ಮರಿಸುವುದರ ಮೂಲಕ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೋ ಆ ಪರಮ ಪವಿತ್ರ ಮಂತ್ರವಾದ "ಶ್ರೀ ರಾಘವೇಂದ್ರಾಯ ನಮಃ" ಅಷ್ಟಾಕ್ಷರ ಮಂತ್ರವನ್ನು 108 ಕೋಟಿ ಲೇಖನ ಯಜ್ಞವನ್ನು 2001ರಲ್ಲಿ ಶ್ರೀ ಗುರುರಾಯರ ಪ್ರೇರಣೆಯಂತೆ ಯಲಹಂಕ "ಶ್ರೀ ರಾಯರ" ಮಠದಲ್ಲಿ ಅಮೂಲ್ಯವಾದ ಪುಸ್ತಕವನ್ನು ತಿರುಪತಿ ತಿಮ್ಮಪ್ಪ - ಪದ್ಮಾವತಮ್ಮ ನವರ ಸನ್ನಿಧಾನದಲ್ಲಿ ಅಷ್ಟಾವಧಾನ ಹೇಳುತ್ತಿದ್ದ ಯಲಹಂಕದಲ್ಲಿಯೇ ವಾಸವಿದ್ದ ವಯೋವೃದ್ಧರು , ಆಧ್ಯಾತ್ಮಿಕ ಚಿಂತಕರು ಆದ ಪೂಜ್ಯ ಅವರ ಅಮೃತ ಹಸ್ತದಿಂದ ಯಲಹಂಕ "ಶ್ರೀ ರಾಯರ" ಮಠದ ಮುಂದಿನ ಸಮಿತಿಯ ಸದಸ್ಯರ ಸಹಕಾರ ಹಾಗೂ ವಯೋವೃದ್ಧರಾದ ಶ್ರೀ ವಲ್ಲಿ ಅಮ್ಮನವರು ಹಾಗೂ ಅವರ ಮಕ್ಕಳಾದ ಶ್ರೀಮತಿ ಮತ್ತು ಗೋಪಾಲಕೃಷ್ಣರವರ ತುಂಬು ಹೃದಯದ ಸಹಕಾರದೊಂದಿಗೆ ದಿನಾಂಕ 14./1/2001 ರಂದು ಪುಸ್ತಕ ಬಿಡುಗಡೆಯಾಯಿತು.
ಅಂದಿನಿಂದ ಇಂದಿನವರೆಗೂ ಈ 108 ಕೋಟಿ " ಶ್ರೀ ರಾಘವೇಂದ್ರಾಯ ನಮಃ" ಅಷ್ಟಾಕ್ಷರ ಲೇಖನ ಯಜ್ಞದಲ್ಲಿ ಲಕ್ಷಾಂತರ ಭಕ್ತಾದಿಗಳು ಕೋಟಿ ಕೋಟಿ "ಶ್ರೀ ರಾಘವೇಂದ್ರಾಯ ನಮಃ" ಎಂದು ಬರೆದ ಪುಸ್ತಕಗಳನ್ನೇ ಬೃಂದಾವನವನ್ನಾಗಿ ಮಾಡಿ ಅದರ ಮುಂದೆ ಭಕ್ತಾದಿಗಳು ತುಪ್ಪದ ದೀಪವನ್ನು ಹಚ್ಚಲು ಶ್ರೀರಾಯರ ಪ್ರೇರಣಾ ಅನುಸಾರ ಕಾಮಧೇನು ಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ ಇದು ವಿಶ್ವದಲ್ಲಿಯೇ ಏಕೈಕ 108 ಕೋಟಿ " ಶ್ರೀ ರಾಘವೇಂದ್ರಾಯ ನಮಃ " ಪುಸ್ತಕ ಬೃಂದಾವನ
ಈ ಮೇಲೆ ಹೇಳಿರುವ ಎಲ್ಲಾ ಸಂಗತಿಗಳು " ಶ್ರೀರಾಯರ" ಪ್ರೇರಣಾನುಸಾರ ಕಾಮಧೇನು ಕ್ಷೇತ್ರದ ಸ್ಥಾಪನೆಗೆ ಕಾರಣೀಭೂತವಾಗಿದೆ.
ನನ್ನ ಸಂಕಲ್ಪ
ಸುಮಾರು 22 ವರ್ಷದ ಹಿಂದೆ ನನ್ನ ಕಲ್ಪನೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಮೃತಿಕಾ ಬೃಂದಾವನವನ್ನು ಸುಮಾರು ಐದು ಎಕರೆ ಜಾಗದಲ್ಲಿ ಮಾಡಬೇಕು . ನಿತ್ಯವೂ ಅನದಾನ ಆಗಬೇಕು ,ಸೇವಾ ಕ್ಷೇತ್ರವಾಗಬೇಕು ,ಬಂದವರ ಪಾಲಿಗೆ ತವರು ಮನೆ ಆಗಿರಬೇಕು ಎಂಬ ಭಾವನೆಯನ್ನು ಇಟ್ಟುಕೊಂಡು ನಿರಂತರವಾಗಿ ಶ್ರೀರಾಯರಲ್ಲಿಯೇ , ನಿನ್ನಿಂದಲೇ-. ನೀನೇ ಈ ನನ್ನ ಸಂಕಲ್ಪವನ್ನು ಅನುಗ್ರಹಿಸಬೇಕು" ಶ್ರೀ ಗುರುರಾಯ"- ಎಂಬುದಾಗಿ ರಾಯರಲ್ಲಿ ಪ್ರಾರ್ಥಿಸುತ್ತಿದ್ದೆ.
ಇದರ ಫಲವೆಂಬಂತೆ 2006ರಲ್ಲಿ ಪ್ರಸ್ತುತ ಕಾಮಧೇನು ಕ್ಷೇತ್ರಕ್ಕೆ ಸ್ಥಳವನ್ನು ನೀಡಿರುವ ಧಾನಿಗಳಾದ ಶ್ರೀಮಾನ್ ರಂಗಯ್ಯ ಹಾಗೂ ಮಹದೇವಪ್ಪನವರಗಳ ಭೇಟಿಯಾಗಿ , ಇವರಗಳನ್ನು ಸಾಕ್ಷಾತ್ ಶ್ರೀ ರಾಯರೇ ನಿಂತು ನುಡಿಯುವ ಸನ್ನಿಧಾನವಾದ ಸ ಸಾರಕ್ಕಿ ಅಮ್ಮನವರ ಬಳಿ ಕರೆದುಕೊಂಡು ಹೋಗಲಾಗಿ ಅಂದು ಗುರುವಾರವಾದ್ದರಿಂದ ಗುರುಗಳ ಸನ್ನಿಧಾನ ಇದ್ದು, ಗುರುಗಳನ್ನು ರಂಗಯ್ಯನವರು ತಮ್ಮ ಬೃಂದಾವನ ಪ್ರತಿಷ್ಠಾಪಿಸಬೇಕಾಗಿದೆ ನಮಗೆ ನೀವು ಅನುಗ್ರಹ ಮಾಡಬೇಕು ಎಂಬುದಾಗಿ ಪ್ರಾರ್ಥಿಸಿದಾಗ "ಶ್ರೀರಾಯರು" ನುಡಿದಂತೆ ಹೇಳುವುದಾದರೆ - "ಮಗು ಆ ಜಾಗದಲ್ಲಿ ಎರಡು ಬಂಡೆಗಳಿವೆ. ಆ ಬಂಡೆಗಳಲ್ಲಿ ಎರಡು ಹೆಣ್ಣು ದೇವತೆಗಳಿವೆ. ಅವರ ಗಳಿಗೆ ಪೂಜೆ ಮಾಡಿಕೊಂಡು ಬಾ ಹಾಗು ನನ್ನ ಭಾವಚಿತ್ರ ಇಟ್ಟು ನನ್ನ ಭಕ್ತರಗಳಿಂದ ಭಜನೆಯನ್ನು ಮಾಡು ನಾನು ಬರುತ್ತೇನೆ "ಎಂಬುದಾಗಿ ಸಾರಕ್ಕಿ ಅಮ್ಮನವರ ಮೂಲಕ ಶ್ರೀರಾಯರ ವಾಣಿಯಾಯಿತು.
ತದನಂತರ 2008ರಲ್ಲಿ ಶ್ರೀರಾಯರ ಸನ್ನಿಧಾನದಲ್ಲಿ ಮತ್ತೆ ರಂಗಯ್ಯನವರು ಭೇಟಿಯಾಗಿ ನಮ್ಮಿಂದ ಶ್ರೀರಾಯರ ಬೃಂದಾವನ ಪ್ರತಿಷ್ಠಾಪನೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾರಿಗಾದರೂ ಆ ಜಾಗವನ್ನು (ಶ್ರೀರಾಯರ ಬೃಂದಾವನಕ್ಕೆ ಮೀಸಲಿಟ್ಟ ಜಾಗ) ದಾನವಾಗಿ ನೀಡಲು ಇಚ್ಚಿಸಿದ್ದೇವೆ ಎಂದು ಹೇಳಿದರು. ಅವರ ಈ ಮಾತುಗಳನ್ನು ನಾನು ಆಲಿಸಿದ ಕ್ಷಣವೇ ನನ್ನ ಅಪೇಕ್ಷೆಯನ್ನು ಅವರಲ್ಲಿ ತೋಡಿಕೊಂಡು ಒಂದು ವೇಳೆ ನಿಮಗೆ ಅಪೇಕ್ಷೆ ಇದ್ದಲ್ಲಿ ನನಗೆ ಕೊಡುವುದಾದಲ್ಲಿ ನಾನು ಒಂದು ಅದ್ಭುತವಾದಂತಹ ಶ್ರೀ ರಾಯರ ಕ್ಷೇತ್ರವನ್ನು ಮಾಡುತ್ತೇನೆ ಎಂಬುದಾಗಿ ಹೇಳಿದೆ." ಶ್ರೀರಾಯರು" ನನಗೆ ಅನುಗ್ರಹ ಮಾಡಿ ರಂಗಯ್ಯ- ಮಹಾದೇವಪ್ಪ- ಚೆನ್ನಪ್ಪ - ಪ್ರಕಾಶ್ ಪಾಟೀಲ್ ಹಾಗೂ ಶ್ರೀರಾಯರ ಅಂತರಂಗ ಭಕ್ತರಾದ ಶ್ರೀ ಬಿ .ಬಿ ಪಾಟೀಲ್ ಕುಲಕರ್ಣಿ ರವರಗಳಿಗೆ ಪ್ರೇರಣೆ ಮಾಡಿ ಅಗಸ್ತ್ಯ ಮಹರ್ಷಿಗಳು ಸಂಚಾರ ಮಾಡಿರುವ ಹಾಗೂ "ಶ್ರೀ ಶ್ರೀ ವ್ಯಾಸರಾಜರ ಪರಮ ಪವಿತ್ರ ಪಾದಸ್ಪರ್ಶವಾಗಿರುವ ಪುಣ್ಯ ಸ್ಥಳದಲ್ಲಿ "ಶ್ರೀ ಗುರುರಾಯರ" ಪ್ರೇರಣಾನುಸಾರ ಅವರ ಅನುಗ್ರಹದಿಂದ 2009 ಮಾರ್ಚ್ 3 ರಂದು" ಶ್ರೀ ರಾಘವೇಂದ್ರ ಸ್ವಾಮಿ" ಗಳವರ ವರ್ಧತೋತ್ಸವದ ದಿನದಂದು "ಶ್ರೀ ರಾಘವೇಂದ್ರ ಸ್ವಾಮಿ"ಗಳವರು ಸಹಸ್ರಾರು ಜನ "ಶ್ರೀ ರಾಘವೇಂದ್ರಾಯ ನಮಃ" ಅಷ್ಟಾಕ್ಷರ ಮಂತ್ರ ಬರೆದ ಪುಸ್ತಕಗಳ ಮೂಲಕ ಸನ್ನಿಹಿತರಾದರು.
ಈ ಅಮೃತಗಳಿಗೆ ಯಾರು ನಿರೀಕ್ಷಿಸಿದ ರೀತಿಯಲ್ಲಿ ಭಕ್ತ ಜನಕೋಟಿಯನ್ನು ಬರಮಾಡಿಕೊಂಡರು .ಇದು ಹೇಗೆ ಎಂದರೆ, ಶ್ರೀನಿವಾಸನ ದರ್ಶನ ಕಾಂಕ್ಷಿಯಾಗಿ ಹೋದಾಗ ಆ ಭಕ್ತ ಜನ ಸಾಗರವನ್ನು ಕಂಡು ಹೀಗೆಂದು ನೋಡಿದಿದ್ದಾರೆ- ಅವರು ಹಾಡಿನಲ್ಲಿ ನಿನ್ನ ದರ್ಶನಕ್ಕೆ ಬಂದವನಲ್ಲ ನಾನು ಈ ಹಾಡಿನಲ್ಲಿ ಹೇಳುತ್ತಾರೆ .ಎಷ್ಟು ಜನ್ಮದಲ್ಲಿ ಜ್ಞಾನ ಸಂಪಾದಿಸಿದರೆ , ಎಷ್ಟು ಹವನ - ಹೋಮ ಮಾಡಿದರೆ, ಎಷ್ಟು ಜಪ - ತಪ ಮಾಡಿದರೆ, ಇಷ್ಟು ಜನರು ಸೇರಲಿಕ್ಕೆ ಸಾಧ್ಯ ಏ ! ಶೀನಿವಾಸ ನೀನಿರುವ ಸ್ಥಳವೇ ಪವಿತ್ರ ಸ್ಥಳ , ನೀನಿರುವ ಜಾಗವೇ ಸರ್ವತೀರ್ಥದ ಫಲ, ನಿನ್ನ ದರ್ಶನವೇ ಸರ್ವ ಯಾತ್ರೆಯ ಫಲ ಎಂದು ಹೇಳಿದಂತೆ, ಕಾಮಧೇನು ಕ್ಷೇತ್ರವು " ಶ್ರೀ ಗುರುರಾಯರ" ಪವಿತ್ರ ಸನ್ನಿಧಾನವಾಗಿದ್ದು ಅವರ ದರ್ಶನವೇ ಸರ್ವ ಪಾಪ ಗಳ ಪರಿಹಾರ ಅವರ ಪಾದೋದಕವೇ ಸರ್ವ ರೋಗ - ರುಜಿನಗಳ ನಿವಾರಣೆ - ಅವರ ಫಲಮಂತ್ರಾಕ್ಷತೆಯೇ ಸರ್ವಾಭಿಷ್ಟ ಅವರ ಸೇವೆಯೇ ಜೀವನದ ಪರಮ ಜ್ಯೋತಿ - ಹೀಗೆ ಇರುವ "ಶ್ರೀ ಗುರುರಾಯರ" ವಿಶೇಷ ಸನ್ನಿಧಾನವೇ ಕಾಮಧೇನು ಕ್ಷೇತ್ರ.
ಆತ್ಮೀಯರೇ
ಮತ್ತೊಂದು ಅದ್ಭುತ ವಿಷಯವನ್ನು ತಮ್ಮಲ್ಲಿ ನಿವೇದಿಸಿಕೊಳ್ಳಲು ಹರ್ಷವಾಗುತ್ತದೆ .ಕಾರಣ ಇಷ್ಟು ಅದ್ಭುತವಾದಂತಹ " ಶ್ರೀ ಗುರುರಾಯರ" ಸಾಲಿಗ್ರಾಮ ಶಿಲಾ ಮೃತಿಕಾ ಬೃಂದಾವನ ಸನ್ನಿಧಾನವು ಮಹತ್ತರವಾಗಿ ಮೂಡಿಬಂದಿದ್ದು ,ಇದರೊಂದಿಗೆ ಸುಮಾರು 70 - 80 ಲಕ್ಷ ಶ್ರೀ ರಾಯರ ಮಹಾಪ್ರಸಾದವನ್ನು ಸ್ವೀಕರಿಸಿದ್ದಾಗಿ " ಶ್ರೀ ಗುರುರಾಯರ " ಅನುಗ್ರಹ ಈ ಮಹಾಪ್ರಸಾದದ ಪಾತ್ರೆ ಅಕ್ಷಯ ವಾಗಿಯೇ ಇರುವುದು ಶ್ರೀ ಗುರುರಾಯರ ಮಾತೃ ಹೃದಯಕೆ ಸಾಕ್ಷಿ .ಎಷ್ಟು ಜನಸ್ತೋಮ ಜನಸಾಗರ ಬಂದಾಗ (ಪ್ರತಿ ಗುರುವಾರ ಭಾನುವಾರ 15ರಿಂದ 20 ಸಾವಿರ ಜನ) ಎಲ್ಲರಿಗೂ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡಿರುವ ಮಹಾತ್ಮರು ಶ್ರೀ ರಾಘವೇಂದ್ರ ತೀರ್ಥರು.ಈ ಅಮೃತಗಳಿಗೆ ಯಾರು ನಿರೀಕ್ಷಿಸಿದ ರೀತಿಯಲ್ಲಿ ಭಕ್ತ ಜನಕೋಟಿಯನ್ನು ಬರಮಾಡಿಕೊಂಡರು .ಇದು ಹೇಗೆ ಎಂದರೆ, ಶ್ರೀನಿವಾಸನ ದರ್ಶನ ಕಾಂಕ್ಷಿಯಾಗಿ ಹೋದಾಗ ಆ ಭಕ್ತ ಜನ ಸಾಗರವನ್ನು ಕಂಡು ಹೀಗೆಂದು ನೋಡಿದಿದ್ದಾರೆ- ಅವರು ಹಾಡಿನಲ್ಲಿ ನಿನ್ನ ದರ್ಶನಕ್ಕೆ ಬಂದವನಲ್ಲ ನಾನು ಈ ಹಾಡಿನಲ್ಲಿ ಹೇಳುತ್ತಾರೆ .ಎಷ್ಟು ಜನ್ಮದಲ್ಲಿ ಜ್ಞಾನ ಸಂಪಾದಿಸಿದರೆ , ಎಷ್ಟು ಹವನ - ಹೋಮ ಮಾಡಿದರೆ, ಎಷ್ಟು ಜಪ - ತಪ ಮಾಡಿದರೆ, ಇಷ್ಟು ಜನರು ಸೇರಲಿಕ್ಕೆ ಸಾಧ್ಯ ಏ ! ಶೀನಿವಾಸ ನೀನಿರುವ ಸ್ಥಳವೇ ಪವಿತ್ರ ಸ್ಥಳ , ನೀನಿರುವ ಜಾಗವೇ ಸರ್ವತೀರ್ಥದ ಫಲ, ನಿನ್ನ ದರ್ಶನವೇ ಸರ್ವ ಯಾತ್ರೆಯ ಫಲ ಎಂದು ಹೇಳಿದಂತೆ, ಕಾಮಧೇನು ಕ್ಷೇತ್ರವು " ಶ್ರೀ ಗುರುರಾಯರ" ಪವಿತ್ರ ಸನ್ನಿಧಾನವಾಗಿದ್ದು ಅವರ ದರ್ಶನವೇ ಸರ್ವ ಪಾಪ ಗಳ ಪರಿಹಾರ ಅವರ ಪಾದೋದಕವೇ ಸರ್ವ ರೋಗ - ರುಜಿನಗಳ ನಿವಾರಣೆ - ಅವರ ಫಲಮಂತ್ರಾಕ್ಷತೆಯೇ ಸರ್ವಾಭಿಷ್ಟ ಅವರ ಸೇವೆಯೇ ಜೀವನದ ಪರಮ ಜ್ಯೋತಿ - ಹೀಗೆ ಇರುವ "ಶ್ರೀ ಗುರುರಾಯರ" ವಿಶೇಷ ಸನ್ನಿಧಾನವೇ ಕಾಮಧೇನು ಕ್ಷೇತ್ರ.
ಕಾಮಧೇನು ಕ್ಷೇತ್ರ ಹೆಸರು ಪ್ರತಿಯೊಬ್ಬರ ಬಾಯಲ್ಲಿ ಬಹಳ ಅರ್ಥಗರ್ಭಿತವಾಗಿದೆ -ಮಹತ್ತರವಾಗಿದೆ . ಹೆಸರೇ ಸೂಚಿಸುವಂತೆ ಕ್ಷೇತ್ರದಲ್ಲಿ ಎಲ್ಲವೂ ಕಾಮಧೇನುವಾಗಿಯೇ ಇದೆ . ಇಂತಹ ಅದ್ಭುತವಾದಂತಹ - ಮಹತ್ತರವಾದಂತಹ- ಅರ್ಥಗರ್ಭಿತವಾದಂತಹ ಹೆಸರನ್ನು ನಾಮಕರಣ ಮಾಡಿದ ಮಹಾನುಭಾವರು " ಶ್ರೀ ರಾಘವೇಂದ್ರ ಗುರು ಸಾರ್ವಭೌಮರು".